ಭಾನುಮತಿ 2

 1925. ಒಂದು ಕಾಲದಲ್ಲಿ ದಕ್ಷಿಣಭಾರತದ ಪ್ರಮುಖ ಚಲನಚಿತ್ರ ತಾರೆಯಾಗಿ ಮೆರೆದವರು. ಲೇಖಕಿ ಹಾಗೂ ಕತೆಗಾರ್ತಿ, ಪಾಲುವಾಯಿ ಭಾನುಮತಿ ಅವರು ಆಂಧ್ರಪ್ರದೇಶದ ಒಂಗೋಲು ತಾಲ್ಲೂಕು ತೇತವರಮ್ ಗ್ರ್ರಾಮದಲ್ಲಿ ಜನಿಸಿದರು. ತಂದೆ ವೆಂಕಟಸುಬ್ಬಯ್ಯ ಮಗಳಿಗೆ ಕಿರಿಯ ವಯಸ್ಸಿನಲ್ಲೇ ಸಂಗೀತ ನೃತ್ಯಕಲೆಗಳನ್ನು ಕಲಿಸಿದರು.

ವರವಿಕ್ರ್ರಯಮ್ ಭಾನುಮತಿ ನಟಿಸಿದ ಮೊದಲ ಚಲನಚಿತ್ರ. ಆಗ ಇವರ ವಯಸ್ಸು ಹದಿಮೂರು ಕಾಳಿಂದಿಯ ಪಾತ್ರದಲ್ಲಿ ಈಕೆ ಪ್ರದರ್ಶಿಸಿದ ಮುಗ್ಧ ಅಭಿನಯ, ಹಾಡಿದ ಮಧುರಗೀತೆಗಳು ಜನರನ್ನು ಆಕರ್ಷಿಸಿದುವು. 1949ರಲ್ಲಿ ಇವರು ಮದರಾಸಿಗೆ ಹೋದರು. ಅಲ್ಲಿಗೆ ಹೋದಕೂಡಲೇ 'ತಹಸೀಲ್‍ದಾರ್ ಚಿತ್ರದಲ್ಲಿ ನಟಿಸಲು ಅವಕಾಶ ಸಿಕ್ಕಿತು. ಆ ಚಿತ್ರ ತುಂಬ ಯಶಸ್ವಿಯಾಗಿ ಭಾನಾಮತಿಯವರಿಗೆ ಚಲನಚಿತ್ರರಂಗದಲ್ಲಿ ಸ್ಥಿರ ಸ್ಥಾನ ಒದಗಿಸಿಕೊಟ್ಟಿತು. ಅಪೂರ್ವ ಸಹೋದರರು ಚಿತ್ರದಿಂದ ತಮಿಳು ಚಿತ್ರರಂಗಕ್ಕೂ ಕಾಲಿಟ್ಟರು. ಅದರ ಹಿಂದಿ ಅವರತರಣಿಕೆಯಾದ ನಿಷಾನ್ ನಿಂದ ಉತ್ತರ ಭಾರತಕ್ಕೂ ಇವರ ಖ್ಯಾತಿ ಹಬ್ಬಿತು. ತಮಿಳಿನಲ್ಲಿ ಮಲೈಕಳ್ಳನ್.' ರಂಗೂನ್‍ರಾಧಾ, ರಾಣಿ ಮುಂತಾದ ಚಿತ್ರಗಳಿಗೆ ಲಭಿಸಿದ ಯಶಸ್ಸಿನಿಂದ ಇವರು ಆ ಭಾಷೆಯ ಅಗ್ರಶ್ರೇಣಿ ತಾರೆ ಎನಿಸಿದರು.

ವಾಹಿನಿ ಚಿತ್ರ ನಿರ್ಮಾಣ ಸಂಸ್ಥೆ ನಿರ್ಮಿಸಿದ ಸ್ವರ್ಗ ಸೀಮ ಚಿತ್ರ ಭಾನುಮತಿಗೆ ತಾರೆಯಾಗಿ ಮತ್ತು ಗಾಯಕಿಯಾಗಿ ಒಳ್ಳೆಯ ಹೆಸರು ತಂದು ಕೊಟ್ಟಿತು. ಅದೇ ಸಂಸ್ಥೆಯ ಮಲ್ಲೇಶ್ವರಿ' ಇವರ ಅತ್ಯಂತ ಯಶಸ್ವೀ ಚಿತ್ರ..

ಚಲನಚಿತ್ರ ನಿರ್ದೇಶಕರಾದ ಪಾಲುವಾಯಿ ರಾಮಕೃಷ್ಣ ಭಾನುಮತಿಯವರ ಪತಿ. ಇವರಿಬ್ಬರೂ ಸೇರಿ ಭರಣಿ ಪಿಕ್ಚರ್ಸ್ ಎಂಬ ಚಿತ್ರ ನಿರ್ಮಾಣ ಸಂಸ್ಥೆಯನ್ನೂ ಸ್ಟುಡಿಯೋವನ್ನೂ ಸ್ಥಾಪಿಸಿದರು. ರತ್ನಮಾಲ,' ಲೈಲಾಮಜ್ನು, ವಿಪ್ರನಾರಾಯಣ', ಚಕ್ರಪಾಣಿ, ಚಿಂತಾಮಣಿ ಮುಂತಾದ ಒಳ್ಳೆಯ ಚಿತ್ರಗಳನ್ನು ಈ ಸಂಸ್ಥೆ ನಿರ್ಮಿಸಿತು. ಕೆಲವು ಚಿತ್ರಗಳಿಗೆ ನಿರ್ದೇಶಕರು ಮತ್ತು ಸಂಗೀತ ನಿರ್ದೇಶಕರಾಗಿಯೂ ಇವರು ಕೆಲಸ ಮಾಡಿದರು. ಈ ಚಿತ್ರಗಳಲ್ಲಿ ನಾಯಕಿಯಾಗಿ ಇವರು ಪ್ರದರ್ಶಿಸಿರುವ ಅಭಿನಯ ಉನ್ನತ ಮಟ್ಟದ್ದು. ಹಿಂದಿ, ತಮಿಳು ಮತ್ತು ತೆಲುಗಿನಲ್ಲಿ ಚಂಡೀರಾಣಿ ಚಿತ್ರ ನಿರ್ಮಿಸಿ ಅದರಲ್ಲಿ ನಾಯಕಿ. ನಿರ್ದೇಶಕಿ ಹಾಗೂ ಸಂಗೀತ ನಿರ್ದೇಶಕಿಯಾಗಿ ಇವರು ತಮ್ಮ ಪ್ರತಿಭೆಯನ್ನು ಪ್ರಕಟಿಸಿದ್ದಾರೆ.

ಅತ್ತಗಾರಿ ಕಥಲು (ಅತ್ತೆಯವರು ಕಥೆಗಳು) ಇವರದೇ ಸೃಷ್ಟಿ. ಆಧುನಿಕ ತೆಲುಗು ಸಾಹಿತ್ಯದಲ್ಲಿ ಅತ್ತೆಯ ಪಾತ್ರವೊಂದನ್ನು ಸೃಷ್ಟಿಸಿ ಲಲಿತಹಾಸ್ಯಪ್ರಕಾರದಲ್ಲಿ ಹೆಸರು ಮಾಡಿದರು. ಈ ಕೃತಿಗೆ ಆಂಧ್ರಪ್ರದೇಶ ಸಾಹಿತ್ಯ ಅಕಾಡೆಮಿ ಬಹುಮಾನ ನೀಡಿದೆ (1964-65). 1966ರಲ್ಲಿ ಭಾರತ ಸರ್ಕಾರ ಇವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ. ಆಂಧ್ರ ವಿಶ್ವವಿದ್ಯಾಲಯ ಕಳಾಪರಿಪೂರ್ಣ ಎಂಬ ಆರ್. ವೆಂಕಟೇಶ್ವರ ವಿಶ್ವವಿದ್ಯಾನಿಲಯ ಗೌರವ ಡಾಕ್ಟರೇಟ್ ನೀಡಿದೆ. 

ಭಾನುಮತಿ ಸಂಗೀತ ನಿರ್ದೇಶಕರು ಮಾತ್ರವಲ್ಲ ಉತ್ತಮ ಹಿನ್ನೆಲೆ ಗಾಯಕ, ತಮಿಳು, ತೆಲಗು ಚಿತ್ರಗಳಲ್ಲಿ ಕರ್ನಾಟಕ ಮತ್ತು ಹಿಂದೂಸ್ಥಾನಿ ಶೈಲಿಯ ಗೀತೆಗಳನ್ನು ಹಾಡಿದ್ದಾರೆ. ಜೊತೆಗೆ ಅನೇಕ ಚಿತ್ರಗಳಿಗೆ ಪಾಪ್ ಶೈಲಿಯ ಗೀತೆಗಳನ್ನೂ ಹಾಡಿ ವೈವಿಧ್ಯಮಯ ಪ್ರತಿಭೆಯ ಕಲಾವಿದೆಯೆಂಬ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ತಮಿಳು ನಾಡು ಸರಕಾರ ಇವರನ್ನು ಸರಕಾರಿ ಸಂಗೀತ ಶಾಲೆಗೂ ಪ್ರಾಂಶುಪಾಲರನ್ನಾಗಿ (1985-88) ನೇಮಿಸಿತು.

ಭಾನುಮತಿಯವರಿಗೆ ವೃತ್ತಿಪರ ಸಂಸ್ಥೆಗಳಿಂದ ಸಂದ ಗೌರವಗಳು ಹಲವಾರು. ಬ್ರಿಟನ್ನಿನ ನಿದೆರ್Éೀಶಕರ ಸಂಘ, ಕರ್ನಾಟಕ ಚಲನಚಿತ್ರ ನಿದೆರ್Éೀಶಕರ ಸಂಘಗಳು, ಪ್ರಥಮ ಮಹಿಳಾ ನಿರ್ದೇಶಕಿಯೆಂದು ಗುರುತಿಸಿ ಗೌರವಿಸಿದೆ. ಆಂದ್ರ ಪ್ರಾಂತೀಯ ಸರಕಾರ ಪ್ರತಿಷ್ಟಿತ ರಘುಪತಿ ವೆಂಕಯ್ಯ ಸ್ಮಾರಕ ಪ್ರಶಸ್ತಿ ನೀಡಿ ಪುರಸ್ಕರಿಸಿದೆ. 
	(ಆರ್.ವಿ.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ